ಕಾರ್ಮಿಕ ಕಾನೂನು ಕಲ್ಯಾಣ ಮತ್ತು ಶಿಕ್ಷಣ (Labour Laws Welfare and Education)

₹310
Street Address #326, 2nd Floor, Opp. Syndicate Bank, Near Dr. AIT College, Kengunte, Mallathahalli
City Bangalore
ZIP/Postal Code 560056
State Karnataka
Country India
178 Views

ಕಾರ್ಮಿಕ ಕಾನೂನು ಕಲ್ಯಾಣ ಮತ್ತು ಶಿಕ್ಷಣ,

ಲೇಖಕರು : ರಾಮ್ ಕೆ. ನವರತ್ನ

 

ಕಾಲ ಬದಲಾದಂತೆ ನಾವೆಲ್ಲರೂ ಬದಲಾಗಬೇಕು ಬದಲಾವಣೆ ನಿಶ್ಚಿತ ಅದರೊಂದಿಗೆ ನಾವು ಹೋದಾಗ ನಮ್ಮ ಅಭಿವೃದ್ಧಿ ಸಾಧ್ಯ, ಇಂದು ಎಲ್ಲ ಕ್ಷೇತ್ರಗಳಲ್ಲಿ ಅನೇಕಾನೇಕ ರೀತಿಯ ಬದಲಾವಣೆ ಅಭಿವೃದ್ಧಿ ಕಾಣುತ್ತಿದ್ದೇವೆ, ಆಧುನಿಕ ಸಲಕರಣೆ, ವಿಧಿ ವಿಧಾನಗಳಾದ, ಮಾಧ್ಯಮ, ಮಾಹಿತಿ ತಂತ್ರಜ್ಞಾನ, ಮಿಂಚಂಚೆ (E-mail) ಗಳಿದ್ದರೂ ಇದು ಕರ್ನಾಟಕದ ತಾಲ್ಲೂಕು, ಹಿಂದುಳಿದ ಹಾಗೂ ದುರ್ಗಮ ಪ್ರದೇಶಗಳ ಜನರಿಗೆ ಅನೇಕ ವಿಷಯಗಳು ತಲುಪಿಲ್ಲ. ಇಂದಿನ ಹೊಸ ಸರ್ಕಾರಗಳು Make in India, ಆಮ್ ಆದ್ಮಿ ಯೋಜನೆ, ಜನ್ ಧನಗಳಂತಹ ವಿಷಯಗಳು ಸಾಮಾನ್ಯರಲ್ಲಿ ಸಾಮಾನ್ಯನಿಗೆ ತಲ್ಪಿಸುವ ದಿಶೆಯಲ್ಲಿ ಪ್ರಯತ್ನ ನಡೆದುದು ಸ್ತುತ್ಯಾರ್ಹ.

ಆದರೂ ಕೈಗಾರಿಕಾ ಸಂಬಂಧಿ ನೌಕರರಿಗೆ, ಅಸಂಘಟಿತ ಕಾರ್ಮಿಕರಿಗೆ ನನಗೆ ತಿಳಿದಂತೆ ಅವರ ಹಕ್ಕು ಬಾಧ್ಯತೆಗಳು ತಿಳಿದಿಲ್ಲ. ಸರ್ಕಾರ ಹಾಗೂ ಕಾನೂನುಗಳು ಕೂಡ ಕೆಲವೊಂದು ಉಪಯುಕ್ತ ಹಾಗೂ ಕಲ್ಯಾಣಕರ ಕಾರ್ಯಕ್ರಮಗಳನ್ನು ನಿರೂಪಿಸಿದ್ದರೂ ಎಲ್ಲರಿಗೂ ಇನ್ನೂ ಮುಟ್ಟಿಲ್ಲ. ಇನ್ನೂ ಬಹಳ ವಿಷಯಗಳು ಆಂಗ್ಲ ಭಾಷೆಯಲ್ಲಿ ಉಳಿದಿವೆ, ಅಲ್ಲದೆ ಮಿಂಚಂಚೆ, Website, Online ವಿಷಯಗಳು ಕನ್ನಡದಲ್ಲಿ ಆಗಬೇಕಾಗಿದೆ. ಕೆಲವೊಂದೆಡೆ ಇವು ಇದ್ದರೂ ಕೂಡ          ಆಗಿಲ್ಲ, ಉದ್ದಿಮೆಗಳಿಗೆ ಮಾಲೀಕರಿಗೆ, ನಿಯೋಜಕರಿಗೆ, ಆಡಳಿತದ ವ್ಯಕ್ತಿಪರರಿಗೆ ಅವರಿಗೆ ಅನ್ವಯದ ರೀತಿಗೆ ಸಹಾಯವಾಗಿ ಕೆಲವೊಂದು ಹಾಗೂ ಅನೇಕ ಸಾಹಿತ್ಯ ಇಂಗ್ಲೀಷ್‍ನಲ್ಲಿ ಇರುವುದಕ್ಕೆ ಕೊರತೆಯಿಲ್ಲ. ಇವರಿಗೆ ಭಾಷೆಯ ಸಮಸ್ಯೆ ಇರದು.

ಅದರೆ ಉದ್ದಿಮೆಗಳಲ್ಲಿಯ ನೌಕರರಿಗೆ, ಸಂಘಗಳ ಸದಸ್ಯರಿಗೆ, ಗುತ್ತಿಗೆ ನೌಕರರಿಗೆ, ಮಹಿಳೆಯರಿಗೆ, ಅನಕ್ಷರಸ್ಥರಿಗೆ, ಕೃಷಿ ಹಾಗೂ ಅಸಂಘಟಿತ ವಲಯದ ನೌಕರರಿಗೆ / ಕಾರ್ಮಿಕರಿಗ ತಲ್ಪುವಂತಹವರಿಗೆ ಸರಳ ರೀತಿಯಲ್ಲಿ ಅರ್ಥವಾಗುವ ತರಹ, ತಿಳಿಯುವ ತರಹ ಹಾಗೂ ಅವರ ತಪ್ಪುಗ್ರಹಿಕೆ, ಅಥವಾ ಅರೆಬರೆ ತಿಳುವಳಿಕೆ ಅಥವಾ ಅದರ ಬಗೆಗಿನ ಅಜ್ಞಾನ ನಿವಾರಿಸುವಲ್ಲಿ ಕಾರ್ಮಿಕ ಕಾಯಿದೆ, ಕಲ್ಯಾಣಗಳಲ್ಲಿ ಒಂದೇ ಸೂರಿನಲ್ಲಿ ಎಲ್ಲ ವಿಷಯಗಳ ಬಗೆಗಿನ ಮಾಹಿತಿ ಒಳಗೊಂಡ ಪುಸ್ತಕ, ಸಾಹಿತ್ಯ ನಾನು ಕಂಡಿಲ್ಲ. ಕೆಲವೊಂದೆಡೆ ಇದ್ದರೂ ಕೂಡ ಆಯಾಯ ಇಲಾಖೆಗೆ ನಿರ್ದಿಷ್ಟವಾಗಿ ಸಂಬಂಧಿಸಿದಂತೆ ಕಾಣಬಹುದು, ಸಮಗ್ರವಾಗಿ ಒಂದೇ ಪುಸ್ತಕದಲ್ಲಿ ಬಂದಿಲ್ಲ.

ಈ ದಿಶೆಯಲ್ಲಿ ನನಗೆ ಅನೇಕ ಸಂಘ ಸಂಸ್ಥೆಗಳ, ಸಂಘದ ಪದಾಧಿಕಾರಿಗಳು, ಕಾರ್ಮಿಕರಿಗೆ ಸೂಕ್ತ ಹಾಗೂ ಉಪಯೋಗವಾಗುವ, ಅವರಿಗೆ ತಲುಪುವ ರೀತಿಯಲ್ಲಿ ಸಾಹಿತ್ಯ ತರಲು ಅನೇಕ ಸಾರಿ ನನಗೆ ಒತ್ತಾಯಿಸುತ್ತಲೇ ಬಂದಿದ್ದಾರೆ. ನಾನು ಇಲ್ಲಿಯವರೆಗೆ ಆರು ಗ್ರಂಥಗಳನ್ನು ಮಾನವ ಸಂಪನ್ಮೂಲ, ಕಾರ್ಮಿಕ ಕಾಯಿದೆಗಳ ಬಗೆಗೆ ವೃತ್ತಿಪರರಿಗೆ, ಉದ್ದಿಮೆಗಳಿಗೆ ಸಹಾಯವಾಗುವಂತೆ ಹೊರತಂದಿದ್ದರೂ ಈ ದಿಶೆಯಲ್ಲಿ ಎಂದರೆ ಕೆಳಸ್ತರದ, ಕಾರ್ಮಿಕ ವರ್ಗ ಉಪಯುಕ್ತ ಕೈಪಿಡಿ, ತರಲು ಪ್ರಚೋದನೆಯಾಯಿತು.

ನಾನು ಈ ಪುಸ್ತಕದಲ್ಲಿ ಕೇವಲ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು, ಅವರ ದೃಷ್ಟಿಕೋನದಲ್ಲಿ ತಿಳಿದುಕೊಂಡು, ಉಪಯೋಗ ಹೊಂದಲು ಪ್ರಯತ್ನಿಸಿದ್ದೇನೆ, ಇದರಲ್ಲಿ ಕಾನೂನು ರೀತಿ ನೋಡದೆ, ಕಲ್ಯಾಣ ದೃಷ್ಟಿಯಲ್ಲಿ ಹಾಗೂ ಅದರಡಿಯ spirits – ಭಾವನೆಗಳ ಭಾವನೆಯಲ್ಲಿ ನೋಡುವ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಅದರಂತೆ ಪುಸ್ತಕದಲ್ಲಿ ಮೊದಲ ಭಾಗವಾಗಿ ಕಾನೂನು, ಎರಡನೆಯ ಭಾಗವಾಗಿ ಕಾರ್ಮಿಕ ಕಲ್ಯಾಣ ಹಾಗೂ ಮೂರನೆಯ ಭಾಗವಾಗಿ ಕಾರ್ಮಿಕ ಶಿಕ್ಷಣದ ಬಗ್ಗೆ ವಿಷಯ ಮಂಡಿಸಿದ್ದೇನೆ. ಕಾನೂನು ಭಾಗದಲ್ಲಿ ಎಲ್ಲ ಕಾರ್ಮಿಕ ಕಾಯಿದೆಗಳ ಸಾರ, ಅನುಕೂಲಗಳು, ಕಲ್ಯಾಣ ಭಾಗದಲ್ಲಿ ಇಂದು ದೊರೆಯುವ ಸವಲತ್ತುಗಳು, ಅನುಕೂಲಗಳನ್ನು ಕ್ರೋಢೀಕರಿಸಿದ್ದರೆ, ಶಿಕ್ಷಣ ಭಾಗದಲ್ಲಿ ಅನೇಕ ಉಪಯುಕ್ತ ನನ್ನ ಲೇಖನಗಳನ್ನು ವಿಶದಪಡಿಸಿದ್ದೇನೆ, ಇದರಲ್ಲಿಯ ಹೆಚ್ಚಿನ ಬರವಣಿಗೆಗಳು ಆಕಾಶವಾಣಿ ಬೆಂಗಳೂರು ನಡೆಸುವ ಕಾರ್ಮಿಕರಿಗಾಗಿ ಕಾರ್ಯಕ್ರಮದಲ್ಲಿ ಕಳೆದ ಒಂದು ದಶಕದಿಂದ ಪ್ರಸಾರವಾಗಿವೆ.

ಈ ಲೇಖನಗಳಲ್ಲಿ ನಾನು ನನ್ನ ತಿಳುವಳಿಕೆ, ಅನುಭವ ಆಧರಿಸಿ, ಯಶಸ್ಸಿಗೆ ಅವಶ್ಯವಾದ ಯೋಚನೆ ಹಾಗೂ ಮಾರ್ಗದರ್ಶನಗಳನ್ನು, ಮೌಲ್ಯಯುತವಾಗಿ ಬಿಂಬಿಸುವ ಸಾಹಸ ಮಾಡಿದ್ದೇನೆ, ಇವುಗಳನ್ನು ಓದುವ ಮೂಲಕ ಸಮಗ್ರ ತಿಳುವಳಿಕೆ, ಜ್ಞಾನ, ಅರಿವು ಮತ್ತು ವಿಷಯದ ಗ್ರಹಿಕೆಯ ಮೂಲಕ ಮೌಲ್ಯಯುತ ಸಾಧನೆಗೆ ದಾರಿ ಆಗಬಹುದು ಎಂದು ನನ್ನ ಅನಿಸಿಕೆ.

ಈ ರೀತಿ ಉದ್ದಿಮೆಗಳಿಗೆ, ಕೈಗಾರಿಕೆಗಳಿಗೆ ಅಸಂಘಟಿತ ವಲಯದ ಉದ್ಯೋಗಿಗಳಿಗೆ, ಕಾನೂನು, ಸಮಾಜಕಾರ್ಯ, ಆಡಳಿತದ ವಿದ್ಯಾರ್ಥಿಗಳಿಗೆ, ಕಾರ್ಮಿಕ ಸಂಘಗಳಿಗೆ ಅದರ ಬಗ್ಗೆ ಆಸಕ್ತಿ ಹೊಂದಿದವರಿಗೆ All-in-one (ಒಂದರಲ್ಲಿಯೇ ಎಲ್ಲ) ಲಭ್ಯವಾಗಿಸುವುದೇ ನನ್ನ ಈ ಅಲ್ಪ ಪ್ರಯತ್ನ ಈ ರೀತಿಯಾಗಿ ಹೊರತರಲು ನನಗೆ ಅನೇಕಾನೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ, ಮಾರ್ಗದರ್ಶನ, ಸಲಹೆ ನೀಡಿದ್ದಾರೆ. ನನ್ನ ಸಹಾಯಕ ಶ್ರೀ ಚೇತನ್ ಹೆಚ್.ಎಸ್. ಈ ಕೃತಿಯನ್ನು ಕಂಪ್ಯೂಟರಿಗೊಳಿಸಲು ಸತತವಾಗಿ ಸಾಕಷ್ಟು ದುಡಿದಿದ್ದಾರೆ, ಅವರ ನೆರವು ನಾನು ಮರೆಯುವಂತಿಲ್ಲ. ಅದೇ ರೀತಿ ಕೃತಿಗೆ ಮೆರುಗು ನೀಡಿದ ಶ್ರೀಯುತ ಮುರಳೀಧರ, ವಕೀಲರು AITUC ಇವರ ಮಾರ್ಗದರ್ಶನ, ಪ್ರೋತ್ಸಾಹ ಅಪರಿಮಿತ, ಅವರಿಂದ ನನ್ನ ಉತ್ಸಾಹ ಇಮ್ಮಡಿಸಿದೆ. ಅದೇ ರೀತಿ ಕೃತಿಗೆ ತಮ್ಮ ಸಲಹೆ, ಸೂಚನೆ, ಕೆಲವೊಂದು ತಿದ್ದುಪಡಿ ಸೂಚಿಸಿದ ನನ್ನ ಮಿತ್ರರು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು ಶ್ರೀಯುತ ವೆಂಕಟೇಶ್ ಮತ್ತು ಶ್ರೀಯುತ ವೀರನಗೌಡ ಇವರಿಬ್ಬರ ಸಹಾಯಕ್ಕೆ ನಾನು ಅಭಾರಿ. ಅದೇ ರೀತಿ ಈ ಕೃತಿ ತರಲು ಸಕಲ ರೀತಿಯ ಉತ್ತೇಜನ, ಸಹಾಯ ನೀಡಿದ ನನ್ನ ಶ್ರೀಮತಿ ಪದ್ಮಾ ರವರಿಗೂ ಧನ್ಯವಾದ ಹಾಗೂ ಈ ಕೃತಿಯನ್ನು ಅತ್ಯಲ್ಪ ವೇಳೆಯಲ್ಲಿ ಮುದ್ರಿಸಿದ ಪ್ರಕಾಶಕರ ಸಹಾಯ ಅಮೂಲ್ಯ. ಕೃತಿಗೆ ಮುನ್ನುಡಿ ಬರೆದ ಡಾ. ವಿಶ್ವನಾಥ್, IAS ಕಾರ್ಮಿಕ ಆಯುಕ್ತರು (ಕರ್ನಾಟಕ ಸರಕಾರ) ಇವರಿಗೂ ನಾನು ಚಿರಋಣಿ.

ಸಹೃದಯ, ಓದುಗರು ಹಾಗೂ ದೇಶದ ಅದರಲ್ಲೂ ಕರ್ನಾಟಕ ಸಮಸ್ತ ಕಾರ್ಮಿಕ ಶ್ರಮಿಕರಿಗೆ ಇದನ್ನು ಅರ್ಪಿಸುವ ಮೂಲಕ ಅವರ ಸಲಹೆ, ಸೂಚನೆ, ಟೀಕೆಗಳಿಗೆ ನಾನು ಮುಕ್ತನಾಗಿದ್ದೇನೆ. ಈ ಕೃತಿ ಅವರಿಗೆ ತಲುಪಿ ಸಹಾಯವಾದಲ್ಲಿ ನನ್ನ ಪರಿಶ್ರಮ, ಜ್ಞಾನ ಸಾರ್ಧಕ. ಇದು ಸಂಬಂಧಿಸಿದವರ ಕೈ ತಲುಪಿದಾಗ ಅದನ್ನು ಅವರು ಇತರರಿಗೂ, ತಮ್ಮ ಮಿತ್ರ ಉದ್ಯೋಗಿಗಳಿಗೂ, ಸಂಘಗಳಿಗೆ ತಲುಪಿಸಿ ಎಂದು ನನ್ನ ಕೋರಿಕೆ.
 
ರಾಮ್ ಕೆನವರತ್ನ

 

M&HR Solutions Private Limited

For more details

Ph: 080-23213710, 8073067542, 9980066890

Website: www.mhrspl.com

Tags:

Leave comment for this ad