ಇ.ಎಸ್.ಐ. ಮಾರ್ಗದರ್ಶಿ (ESI Margadarshi)

₹160/-
Street Address #326, 1st Floor, Opp. Syndicate Bank, Near Dr. AIT College, Kengunte, Mallathahalli
City Bangalore
ZIP/Postal Code 560056
State Karnataka
Country India
171 Views

ಇ.ಎಸ್.ಐ. ಮಾರ್ಗದರ್ಶಿ

ಲೇಖಕರು : ಎಚ್.ಎನ್. ಯಾದವಾಡ

 

ಮುನ್ನುಡಿ

ಪ್ರಪಂಚದಲ್ಲಿಯೇ ಅತೀ ದೊಡ್ಡ ಸಾಮಾಜಿಕ ಸುರಕ್ಷಾ ಯೋಜನೆಯಾದ ಇ.ಎಸ್.ಐ ಯೋಜನೆಯ ಕುರಿತಾದ ಮಾಹಿತಿಗಳ ಜೊತೆಗೆ ಕಾರ್ಮಿಕರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಲೇಖಕರು ಈ ಕಿರು ಹೊತ್ತಿಗೆಯನ್ನು ಪ್ರಶ್ನೋತ್ತರ ರೂಪದಲ್ಲಿ ರಚಿಸಿದ್ದಾರೆ. ಇದು ಸಮಯ-ಸಂದರ್ಭ ಔಚಿತ್ಯಗಳಿಗೆ ಅನುಸಾರವಾಗಿ ಇ. ಎಸ್. ಐ ಅಧಿನಿಯಮದ ಕಾನೂನು, ನಿಯಮ, ಹಿತಲಾಭ ಮತ್ತು ಫಲಾನುಭವಗಳ ಇತಿ-ಮಿತಿಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಪುಸ್ತಕದ ಲೇಖಕರೇ ಹೇಳುವಂತೆ ಇ.ಎಸ್.ಐ ಕಾನೂನಿನ ಫಲಾನುಭವ, ಸೌಲಭ್ಯ ಹಾಗೂ ಹಿತಲಾಭಗಳು ಜನರಿಗೆ ಅರ್ಥವಾಗದೇ ಗೊಂದಲಕ್ಕೆ ಈಡಾಗಲು ಕಾರಣವಾಗಿದೆ. ದೇಶದ ವಿವಿಧ ಭಾಷೆಗಳಲ್ಲಿ ಇ.ಎಸ್.ಐ ಯೋಜನೆಯ ಫಲಾನುಭವಗಳನ್ನು ಮುದ್ರಿಸಿ ವಿತರಿಸಲಾಗಿದೆಯಾದರೂ ಕನ್ನಡದಲ್ಲಿ ಸರಳವಾದ ಪ್ರಶ್ನೋತ್ತರ ಮಾದರಿಯಲ್ಲಿ ಇ.ಎಸ್.ಐ ಯೋಜನೆಯ ಕುರಿತಾದ ಮಾಹಿತಿಯನ್ನು ನೀಡಿರುವುದು ಅತ್ಯಂತ ಸೂಕ್ತವಾಗಿದೆ. 

ಹಿರಿಯರೂ ಹಾಗೂ ಈ ಕಿರು ಹೊತ್ತಿಗೆಯ ಲೇಖಕರಾದ ಶ್ರೀ ಎಚ್.ಎನ್. ಯಾದವಾಡರವರು ಇ.ಎಸ್.ಐ ಇಲಾಖೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ ಅಪಾರ ಅನುಭವ ಮತ್ತು ಜ್ಞಾನದ ಆಧಾರದ ಮೇಲೆ ಉಪಯುಕ್ತವಾಗಿ ಬರೆದಿದ್ದಾರೆ. ಇದರಿಂದ ಲಕ್ಷೊಪಲಕ್ಷ ಕಾರ್ಮಿಕ ಸಿಬ್ಬಂದಿಗಳಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಲೇಖಕರ ಶ್ರಮ ಖಂಡಿತ ಸಾರ್ಥಕವಾಗುತ್ತದೆ. ದೇಶದ ಪ್ರಗತಿಗೆ ದುಡಿಯುತ್ತಿರುವ ಸಮಸ್ತ ಕಾರ್ಮಿಕ ಬಂಧುಗಳಿಗೆ ಈ ಪುಸ್ತಕದಿಂದ ಖಂಡಿತ ಲಾಭವಾಗುತ್ತದೆ. ಪ್ರತಿ ತಿಂಗಳೂ ಕಾರ್ಮಿಕ ತನ್ನ ಸಂಬಳದ ಇ.ಎಸ್.ಐ ವಂತಿಗೆಗೆ ಪ್ರತಿಫಲವಾಗಿ ಸೌಲಭ್ಯಗಳನ್ನು ಪಡೆಯಲು ಈ ಕಿರುಹೊತ್ತಿಗೆ ಮಾರ್ಗದರ್ಶಿ ರೂಪದಲ್ಲಿ ಸಹಾಯ ಮಾಡುತ್ತದೆ.

ದೊಡ್ಡ ಕಾರ್ಖಾನೆ, ಸಣ್ಣ ಕಾರ್ಖಾನೆ, ಮಾರಾಟ-ಮಳಿಗೆ, ಉಪಹಾರ ಗೃಹ, ವಸತಿ ಗೃಹ, ಮುದ್ರಣಾಲಯ, ಸಾರಿಗೆ ಸಂಸ್ಥೆ, ಸಿನಿಮಾ ಮಂದಿರ, ಆರೋಗ್ಯ ಸಂಸ್ಥೆ, ಶಿಕ್ಷಣ ಸಂಸ್ಥೆ ಮತ್ತು ಗುಡಿ ಕೈಗಾರಿಕೆ ಇತ್ಯಾದಿ ಅನೇಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಈ ಕಿರುಪುಸ್ತಕವು ರೆಡಿ ರೆಕನರ್ ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಅಧಿಕಾರಿಗಳು ಮತ್ತು ಕಾರ್ಮಿಕ ಕಲ್ಯಾಣ ಅಧಿಕಾರಿಗಳಿಗೂ ಈ ಕಿರು ಹೊತ್ತಿಗೆಯು ತಕ್ಷಣದ ಅಗತ್ಯವನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ. ಇಎಸ್ಐ ವಿಮಾದಾರರು ಮನೆಯಲ್ಲಿ ಇದನ್ನು ಇಟ್ಟುಕೊಂಡು ಸಮಯ ಸಂದರ್ಭಗಳಲ್ಲಿ ಪುಸ್ತಕದ ಪ್ರಯೋಜನ ಪಡೆಯಬಹುದಾಗಿದೆ.

ಇಂತಹ ಕೃತಿ ರಚಿಸಿರುವ ಹಿರಿಯರಾದ ಶ್ರೀ ಎಚ್.ಎನ್. ಯಾದವಾಡರವರಿಗೆ ಸಮಸ್ತ ಓದುಗರ ಮತ್ತು ಫಲಾನುಭವಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಇಂತಹ ಉಪಯುಕ್ತ ಕೃತಿಯನ್ನು ಪ್ರಕಟಿಸಿದ ನಿರುತ ಪಬ್ಲಿಕೇಷನ್ಸ್ ನ ಗೆಳೆಯ ಶ್ರೀ ಎಂ.ಹೆಚ್. ರಮೇಶರವರಿಗೆ ನನ್ನ ವಂದನಾಪೂರ್ವಕ ಅಭಿನಂದನೆಗಳು ಮತ್ತು ನಮನಗಳು.
 
ಡಾಆರ್ಶಿವಪ್ಪ
ಅಧ್ಯಕ್ಷರು, ಸಮಾಜಕಾರ್ಯ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-570006 

 

ಪುಸ್ತಕಕ್ಕಾಗಿ ಸಂಪರ್ಕಿಸಿ:

ನಿರುತ ಪಬ್ಲಿಕೇಷನ್ಸ್,

ದೂ: 080-23213710

Tags:

Leave comment for this ad